Friday, October 29, 2010

what I belived as religion -----ಸದ್ವರ್ತನೆಗೆ ಮೂಲವಾದ ಆಚಾರವೇ ಧರ್ಮ.


 ನಮ್ಮ ಆಚಾರಗಳು, ಅಂದರೆ ಒಳ್ಳೆಯ ನಡವಳಿಕೆಗಳು ನಮಗೆ ಸ್ವರ್ಗದ ಸುಖವನ್ನು ಕೊಡುತ್ತವೆ. . ಅಂತೆಯೆ ಬಸವಣ್ಣನವರು "ಆಚಾರವೇ ಸ್ವರ್ಗ, "ಅಯ್ಯಾ ಎಂದಡೆ ಸ್ವರ್ಗ " ಎಂದು ಬಸವಣ್ಣನವರು ಹೇಳಿದ್ದಾರೆ. ನಾವು ಬೇರೆಯವರೊಡನೆ ವ್ಯವಹರಿಸುವ ಕ್ರಮದಲ್ಲೇ ಸ್ವರ್ಗ ನರಕಗಳ ನಿರ್ಮಾಣವಾಗುವುದು. ನಮ್ಮ ನಾಗರಿಕ ವರ್ತನೆ ನಮ್ಮೊಳಗೆ ಸ್ವರ್ಗವನ್ನು ಸೃಷ್ಟಿಸಿದರೆ ಅನಾಗರಿಕ ವರ್ತನೆ ಮನಸ್ಸಿನಲ್ಲೇ ನರಕದ ವಾತಾವರಣ ನಿರ್ಮಾಣ ಮಾಡುವುದು.
"ಹಿರಿಯತನವಾವುದೆಂದಡೆ ಗುಣಜ್ಞಾನ, ಆಚಾರಧರ್ಮ; ಕೂಡಲಸಂಗನ ಶರಣರು ಸಾಧಿಸಿದ ಹಿರಿಯತನ" ಎಂದು ಬಸವಣ್ಣನವರು ತಿಳಿಸಿದ್ದಾರೆ. ದುರ್ಗಣಗಳಿಂದ ಕೂಡಿರುವಂಥದ್ದು ಜ್ಞಾನವಲ್ಲ. ವಿಶ್ವವಿನಾಶ ಮಾಡುವಂಥದ್ದು ಜ್ಞಾನವಲ್ಲ. ಮಾನವೀಯತೆಯನ್ನು ಉಳಿಸಿ ಬೆಳೆಸುವ ಜ್ಞಾನವೇ ಗುಣಜ್ಞಾನ. ಇಂಥ ಜ್ಞಾನವೇ ಆಚಾರಕ್ಕೆ ನಾಂದಿ. ಸದ್ವರ್ತನೆಗೆ ಮೂಲವಾದ ಆಚಾರವೇ ಧರ್ಮ.
ತಾಮಸ, ರಾಜಸ ಮತ್ತು ಸಾತ್ವಿಕಗಳೆಂಬ ಮೂರು ಗುಣಗಳಿವ
.ತಾಮಸ ಗುಣಕ್ಕೆ ತಮೋಗುಣ ಎಂದು ಕರೆಯುತ್ತಾರೆ.
ಅಜ್ಞಾನ,
ಮೋಹ,
ನಿದ್ರೆ,
ಚಾಪಲ್ಯ,
ಹೀನವೃತ್ತಿ,
ಪಾಪಕೃತ್ಯ,
ಪರನಿಂದೆ,
ಪರಹಿಂಸೆ

ಎಂಬ ಎಂಟು ತಮೋಗುಣಗಳಿವೆ. ತಮ ಎಂದರೆ ಅಂಧಕಾರ. ಈ ಗುಣಗಳಿಂದ ನಮ್ಮ ಮನಸ್ಸಿನಲ್ಲಿ ಅಂಧಕಾರ ಆವರಿಸುತ್ತದೆ. ಆಗ ನಮಗೆ ಬದುಕಿನ ಒಳ್ಳೆಯದರ ಅರಿವಾಗುವುದಿಲ್ಲ.
ರಾಜಸ ಗುಣಕ್ಕೆ ರಜೋಗುಣ ಎಂದೂ ಕರೆಯುತ್ತಾರೆ.
ಗರ್ವ,
ಕ್ರೋಧ,
ಅಹಂಕಾರ,
ಕಾಮನೆಗಳು,
ಅಪ್ರಿಯ
ವಚನ,
ಮೋಸ,
ಮತ್ಸರ

ಎಂಬ ಎಂಟು ರಜೋಗುಣಗಳಿವೆ. ರಜ ಎಂದರೆ ಧೂಳು. ಈ ಗುಣಗಳು ನಮ್ಮ ಮನಸ್ಸಿನಲ್ಲಿ ಧೂಳು ಸೃಷ್ಟಿಸುತ್ತವೆ. ಆಗ ನಾವು ಬದುಕಿನ ಒಳ್ಳೆಯದನ್ನು ಕಾಣುವ ಅವಕಾಶವನ್ನು ಕಳೆದುಕೊಳ್ಳುತ್ತೇವೆ.
ಎಂಟು ಗುಣಗಳು ಸಾತ್ವಿಕ ಗುಣಗಳು
ಸತ್ಯ,
ಜ್ಞಾನ
ತಪ,
ಮೌನ,
ಹರುಷ
ಶಮೆ (ಮನೋನಿಗ್ರಹ),
ವಿವೇಕ,
ಸಾಹಸ,
ನಿಶ್ಚಯ,
ಧೈರ್ಯ

 ಎಂಬ ಎಂಟು ಗುಣಗಳು ಸಾತ್ವಿಕ ಗುಣಗಳು. ಮಾನವೀಯ ಸತ್ವದಿಂದ ಕೂಡಿದ ಗುಣವೇ ಸಾತ್ವಿಕ ಗುಣ. ದೇವರು "ಸಾತ್ವಿಕರಲ್ಲದವರನೊಲ್ಲನು" ಎಂದು ಬಸವಣ್ಣನವರು ತಿಳಿಸಿದ್ದಾರೆ.
ತ್ರಿವಿಧ ಆಚಾರ: ಸಾತ್ವಿಕ ಗುಣಜ್ಞಾನದೊಂದಿಗೆ ಶರಣರು  ಆಚಾರಧರ್ಮದ ಸಾಧನೆ ಮಾಡಿದ್ದಾರೆ.
ಸದಾಚಾರ,
ನಿಯತಾಚಾರ
ಗಣಾಚಾರ

ಎಂಬುವು ಆಚಾರಧರ್ಮದ ಮೂರು ಅಂಗಗಳಾಗಿವೆ. ಇವುಗಳಿಗೆ ತ್ರಿವಿಧ ಆಚಾರಗಳೆಂದು ಕರೆಯುತ್ತಾರೆ. ಸರ್ವ ಜನರಿಗೆ ಒಪ್ಪುವಂಥದ್ದೇ ಸದಾಚಾರ. ನಮ್ಮ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು ಸಾಧ್ಯವಾಗುವಂಥ ನಿಯಮಗಳನ್ನು ಪಾಲಿಸುವುದೇ ನಿಯತಾಚಾರ. ಶಿವನಿಂದೆಯನ್ನು ಕೇಳದಿರುವುದೇ ಗಣಾಚಾರ.
ಬಹಿರಂಗ ಶುದ್ಧಿಯ ಪಂಚಾಚಾರಗಳಿವೆ
ಪಂಚಾಚಾರ:
ಲಿಂಗಾಚಾರ,
ಸದಾಚಾರ,
ಶಿವಾಚಾರ,
ಗಣಾಚಾರ

ಭೃತ್ಯಾಚಾರ ಎಂಬ ಪಂಚಾಚಾರಗಳಿವೆ
.ದೇವರು ಒಬ್ಬನೇ ಎಂಬ ಭಾವದೊಂದಿಗೆ ಇಷ್ಟಲಿಂಗ ಪೂಜೆ ಮಾಡುವುದು ಲಿಂಗಾಚಾರ.
ಸತ್ಯಶುದ್ಧ ಕಾಯಕ ಮಾಡುವದರ ಮೂಲಕ ಗುರು ಲಿಂಗ ಜಂಗಮಕ್ಕೆ ದಾಸೋಹಂಭಾವದಿಂದ ನೀಡಿ ಸಂತೃಪ್ತ ಜಿವನ ಸಾಗಿಸುವುದು ಸದಾಚಾರ.
ಇಷ್ಟಲಿಂಗ ಧರಿಸಿದವರಲ್ಲಿ ಕುಲಗೋತ್ರಗಳನ್ನು ಹುಡುಕದೆ ಶಿವನೆಂದು ಭಾವಿಸುವುದು ಶಿವಾಚಾರ.
ಶಿವನಿಂದೆ ಕೇಳದಿರುವುದು ಗಣಾಚಾರ.
ಶರಣರ ಮುಂದೆ ತಾನು ಕಿರಿಯ ಎಂದು ಭಾವಿಸುವುದು ಭೃತ್ಯಾಚಾರ.
ಅಂತರಂಗ ಶುದ್ಧಿಯ ಸಪ್ತಾಚಾರ:
 ಕ್ರಿಯಾಚಾರ,(ಜ್ಞಾನವೆಂಬ ಗುರುವಿನ, ಧರ್ಮವೆಂಬ ಲಿಂಗದ ಮತ್ತು ಸಮಾಜವೆಂಬ ಆರಾಧನೆ ಮಾಡುವುದೇ ಕ್ರಿಯಾಚಾರ)
 ಜ್ಞಾನಾಚಾರ,(ವಚನಗಳನ್ನು ಅರಿತುಕೊಂಡು ಆಚರಿಸುವುದು ಜ್ಞಾನಾಚಾರ.)
 ಭಾವಾಚಾರ, (ಕಾಮ, ಕ್ರೋಧ, ಮದ, ಮತ್ಸರ, ಲೋಭ ಮತ್ತು ಮೋಹದಿಂದ ದೂರಾಗಿ ಬದುಕುವುದು ಭಾವಾಚಾರ.)
ಸತ್ಯಾಚಾರ,(ನುಡಿದಂತೆ ನಡೆಯುವುದು ಸತ್ಯಾಚಾರ)
ನಿತ್ಯಾಚಾರ, (ಪಾಲಿಗೆ ಬಂದುದು ಪಂಚಾಮೃತ ಎಂದು ಬದುಕುವುದು ನಿತ್ಯಾಚಾರ.)
ಧರ್ಮಾಚಾರ,(ಭಕ್ತಿಭಾವ ತಾಳುವುದು ಧರ್ಮಾಚಾರ)
ಸರ್ವಾಚಾರ (ಷಟ್‌ಸ್ಥಲ ಮಾರ್ಗದಲ್ಲಿ ನಡೆಯುವುದು ಸರ್ವಾಚಾರ ಸಂಪತ್ತಿನ ಆಚಾರ.)
ಎಂಬುವು ಸಪ್ತಾಚಾರಗಳು.

ಬದುಕನ್ನು ಭವ್ಯವಾಗಿಸುವಲ್ಲಿ ನಮ್ಮ ನಿಮ್ಮ ಪ್ರಯತ್ನ ನಿರ೦ತರವಾಗಿರಲಿ---ನಿಲಾ೦ಜನ
 .



.

.

No comments:

Post a Comment