Sunday, March 29, 2015

’ತೇಜಸ್ವಿ-‘ಅದು ನೆಲಮೂಲದಿಂದ, ಮಣ್ಣಿನ ಮೂಲದಿಂದ ದಕ್ಕಿದ ಜ್ಞಾನ’-ಎಪ್ರಿಲ್-೭ ರ೦ದು ನಮ್ಮನಗಲಿದ ಕಾಡಿನ ಸ೦ತ ತೇಜಸ್ವಿಗೆ ನಮನ-4·        
·         
        
·         ’’. ಒಂದು ಗಮನಿಸಿ ನೀರಿಗೆ ಗಾಳ ಹಾಕಿ ದಿನ ಇಡೀ ಕೂರುವ ತೇಜಸ್ವಿ ಅದರ ಜೊತೆ ಗಾಳಕ್ಕೆ ಬಿದ್ದ ಮೀನುಗಳನ್ನ, ಹರಿಯುವ ನದಿಯನ್ನ, ಸುತ್ತಲಿನ ಕಾಡನ್ನ ಅಧ್ಯಯನ ಮಾಡ್ತಾ ಇದ್ರು. ಒಂದು 20 ಅಡಿ ಗಾಳವನ್ನು ನೀರಿಗೆ ಇಳಿಬಿಡುವುದು,ಅದರ ಒಂದು ತುದಿಯಲ್ಲಿ ಚೂಪಾದ ಗಾಳ ಇದ್ರೆ, ಇನ್ನೊಂದು ತುದಿ ಇವರ ಕೈಯಲ್ಲಿರ್ತದೆ.
·         ಕಾಡಿನ ಮಧ್ಯದಲ್ಲಿ ನದಿಯ ದಂಡೆಯ ಮೇಲೆ ತಪಸ್ಸಿಗೆ ಕೂತ ಋಷಿಯ ಹಾಗೆ ಧ್ಯಾನಸ್ಥ ಮನಸ್ಥಿತಿಯಲ್ಲಿ ಕೂರುವ ತೇಜಸ್ವಿಯವರನ್ನ ಎಲ್ಲೋ ಇಪ್ಪತ್ತು ಮುವತ್ತು ಅಡಿ ದೂರದಲ್ಲಿ ನೀರಿನೊಳಗೆ ಮೀನು ಗಾಳವನ್ನು ಕಚ್ಚಿದಾಗ ಉಂಟಾಗುವ ಸಂವೇದನೆ ಧ್ಯಾನಾವಸ್ಥೆಯಲ್ಲಿದ್ದ ತೇಜಸ್ವಿಯವರನ್ನು ಎಚ್ಚರಿಸ್ತಿದ್ದ ಪರಿ ಇದೆಯಲ್ಲ ದಾರಿನಲ್ಲೇ ನಾವು ತೇಜಸ್ವಿಯವ್ರನ್ನ ಅಧ್ಯಯನ ಮಾಡ್ಬೇಕು. ಇನ್ನೊಂದು ಅವರು ಕೇವಲ ಪಕ್ಷಿಗಳಿಗೆ ಕ್ಯಾಮೆರ ಗುರಿ ಇಡ್ತಾ ಇರ್ಲಿಲ ಅಥವ ಕೇವಲ ಪ್ರಾಣಿಗಳಿಗೆ ಕೋವಿ ಗುರಿ ಇಡ್ತಾ ಇರ್ಲಿಲ್ಲಅದರ ಜೊತೆ ಪ್ರಾಣಿ ಪಕ್ಷಿಗಳನ್ನು ಅವರು ಅಧ್ಯಯನ ಮಾಡ್ತಾ ಇದ್ರು.
         ಒಂದು ಹೇಳ್ಲೇಬೇಕು, ಅವರು ವಿಶ್ವವಿದ್ಯಾಲಯದಲ್ಲಿ ಜೀವಶಾಸ್ತ್ರ ಓದಿದವರಲ್ಲ, ಅಥವ ಕೀಟಶಾಸ್ತ್ರ ಓದಿದವರಲ್ಲ. ಆದರೆ ಕೋವಿಯ ಗುರಿಬಿಂದುವಿನ ಮೇಲೆ ಬಂದು ಕುಳಿತ ಕಾಡು ಕೀಟದ ಬಗ್ಗೆ ಅವರು ಮೂರ್ನಾಲ್ಕು ಪುಟ ಬರೀಬಲ್ಲರು. ಅದು ಹೇಗೆ ಸಾಧ್ಯ ಆಯ್ತು? ಎಲ್ಲಿಂದ ಬಂತು ಜ್ಞಾನ?…
                                        ಅಂತ ಕೇಳಿದ್ರೆ ಉತ್ತರ,ಅದು ನೆಲಮೂಲದಿಂದ, ಮಣ್ಣಿನ ಮೂಲದಿಂದ ದಕ್ಕಿದ ಜ್ಞಾನಅಂತ ಹೇಳ್ಬೇಕಾಗುತ್ತೆ. ಬರೀ ಪುಸ್ತಕ ತಿರುವಿ ಹಾಕಿ ಪಡ್ಕೊಳ್ಳೊ ಜ್ಞಾನ ಅಲ್ಲ ಅದು.
·         
·         ನೋಡಿ ನೀವು ಇನ್ನೊಂದು ಗಮನಿಸಿ, ಕುವೆಂಪು ಅವ್ರಿಗೂ ಸಹ ಕಾಡಿನ ಜೊತೆ, ಪ್ರಕೃತಿಯ ಜೊತೆ ನಿಕಟವಾದ ಸಂಬಂಧ. ಕುವೆಂಪು ಅವ್ರನ್ನ ದೊಡ್ಡ ಬೇಟೆಗಾರರು ಅಂತ ಕರೀತಾರೆ. ಅವರ ಆತ್ಮಚರಿತ್ರೆ ಓದಿದ್ರೆ ನಮಗೆ ಅದೆಲ್ಲಾ ಗೊತ್ತಾಗ್ತದೆ. ಕುವೆಂಪು ಅವ್ರು ಮೈಸೂರಿನಿಂದ ಕುಪ್ಪಳ್ಳಿಗೆ ಬಂದಾಗಲೆಲ್ಲಾ ತಮ್ಮ ಬಟ್ಟೆಯನ್ನು ಗೋಡೆಯ ಮೊಳೆಗೆ ನೇತು ಹಾಕಿ ಕೋವಿಯನ್ನು ಹೆಗಲಿಗೇರಿಸಿ ಮದ್ದುಗುಂಡು ತುಂಬಿದ ಚೀಲವನ್ನು ಹೊತ್ತುಕೊಂಡು ಕಾಡಿಗೆ ನುಗ್ತಾ ಇದ್ರು ಬೇಟೆ ಆಡ್ಲಿಕ್ಕೆ. ಇಲ್ಲಿ ಮುಖ್ಯವಾಗಿ ಒಂದು ಗಮನಿಸ್ಬೇಕಾದದ್ದು ಏನು ಅಂದ್ರೆ, ಯಾವ ಚೀಲದಲ್ಲಿ ಹಿಂಸೆಗೆ ಸಂಬಂಧಪಟ್ಟ, ಕ್ರೌರ್ಯಕ್ಕೆ ಸಂಬಂಧಪಟ್ಟ ಮದ್ದುಗುಂಡಿನ ಚೀಲ ಇರ್ತಾ ಇತ್ತೊ ಅದೇ ಚೀಲದಲ್ಲಿ ಅಹಿಂಸೆಗೆ ಸಂಬಂಧಪಟ್ತ ರಾಮಕೃಷ್ಣ ಪರಮಹಂಸರು ಇರ್ತಾ ಇದ್ರು. ಕುವೆಂಪುರವರು ಕಾಡಿನ ಮಧ್ಯದ ಯಾವುದೋ ಒಂದು ಮರದ ಬೊಡ್ಡೆಗೆ ಒರಗಿ ಕೂತು ಏಕಾಂತದಲ್ಲಿ ರಾಮಕೃಷ್ಣ ಪರಮಹಂಸರನ್ನ ಓದ್ತಾ ಇದ್ರು, ಶ್ರೀಮಾತಾ ಓದ್ತಾ ಇದ್ರು, ಸ್ವಾಮಿ ವಿವೇಕನಂದರನ್ನ ಓದ್ತಾ ಇದ್ರು. ಜೊತೆಗೆ ಅವರು ಅವರ ಅನೇಕ ಕವಿತೆಗಳನ್ನ ಬರೆದಿದ್ದೆ ಕಾಡಿನಲ್ಲಿ. ನೋಡಿ ಅವರು ಒರಗಿ ಕುಳಿತ ಮರದ ಬೊಡ್ಡೆಯಿಂದ ಮೇಲೇರಿದ ಬಳ್ಳಿ, ಅದರಲ್ಲಿ ಬಿಟ್ಟ ಹೂವು, ಮೇಲೆ ಕಾಣದಂತೆ ಕುಳಿತು ಹಾಡುವ ಹಕ್ಕಿ ಇವೆಲ್ಲಾ ಅಪ್ಪ ಕುವೆಂಪುರವರನ್ನ ಆಧ್ಯಾತ್ಮದ ರೀತಿಯ ಒಂದು ಅಲೌಕಿಕ ಆನಂದವನ್ನು ಕೊಟ್ಟರೇ ಅದೇ ಕಾಡು, ಅದೇ ಮರ ಅದೇ ಬಳ್ಳಿ ಅದೇ ಕೋಗಿಲೆಯ ದನಿ ಮಗ ತೇಜಸ್ವಿಗೆ ಹೊಸ ಕುತೂಹಲಕ್ಕೆ, ವಿಸ್ಮಯಕ್ಕೆ, ಅನ್ವೇಷಣೆಗೆ ದಾರಿ ಮಾಡಿ ಕೊಡ್ತಿತ್ತು.
·                                                         ಅವರು ಎಲ್ಲೂ ಕೂಡ ಪ್ರಕೃತಿಯನ್ನ ಆಧ್ಯಾತ್ಮದ ನೆಲೆಯಲ್ಲಿ ನೋಡಲೇ ಇಲ್ಲ. ಬದಲಿಗೆ ನೆಲದಿಂದ ಬಗೆದು ಬಗೆದು ಪುಸ್ತಕದ ರೂಪದಲ್ಲಿ ನಮಗೆಲ್ಲಾ ಕೊಟ್ರು. ನನ್ನ ಪ್ರಕಾರ ಕನ್ನಡದ ಘನತೆಯನ್ನ ಹೆಚ್ಚಿಸಿದ ಬರಹಗಳವು’ 
·        
·       
·      , ‘ತೇಜಸ್ವಿಯವರ ಮೌನದ ಹಾಗೆ ಅವರ ಮನಸ್ಸು. ಯಾಕಂದ್ರೆ ಅವರ ನಡೆ ನುಡಿಯಲ್ಲಿ ಎಲ್ಲೂ ನಕಲಿತನ ಇಲ್ಲ, ಎಲ್ಲೂ ಮುಖವಾಡ ಇಲ್ಲ. ಇವತ್ತಿನ ವರ್ತಮಾನದ ಕನ್ನಡ ಸಾಹಿತ್ಯ ಎದುರಿಗಿಟ್ಟುಕೊಂಡು ನೋಡಿದ್ರೆ ಬಹುತೇಕ ಬರಹಗಾರರು, ಸಾಹಿತಿಗಳು ಮುಖವಾಡಗಳನ್ನಿಟ್ಟುಕೊಂಡು ವರ್ತಿಸ್ತಾರೆ ಮತ್ತು ಅವರ ಬರವಣಿಗೆಗಳಲ್ಲೂ ಅದು ಎದ್ದು ಕಾಣುತ್ತೆ. ಜೊತೆಗೆ ಬರೀ ಮಾತು ಮಾತು ಮಾತು….ಬರೀ ಒಣಗಿಹೋದ ಮಾತುಗಳನ್ನ ಸೃಷ್ಟಿಸ್ತಾ ಇದಾರೆ. ಮಾತುಗಳನ್ನ ಕಡಿಮೆ ಮಾಡಿ ಮೌನವನ್ನ ಸೃಷ್ಟಿ ಮಾಡುವ ಹಿನ್ನೆಲೆಯಲ್ಲಿ ನಮ ಬುದ್ದಿಜೀವಿಗಳು ಸ್ವಲ್ಪ ಯೋಚನೆ ಮಾಡ್ಬೇಕು. ಅದಕ್ಕೆ ತೇಜಸ್ವಿಯವರ ಮೌನ ಮತ್ತು ಅವರ ಮನಸ್ಸು
·          ಸುಮಾರು 25 ವರ್ಷಗಳ ಹಿಂದೆ ಕುಕ್ಕುಂಜಡ್ಕ ಅನ್ನುವ ಊರಿಗೆ ಒಂದು ಸಾವಯವ ಕೃಷಿ ಕುರಿತ ವಿಚಾರಗೋಷ್ಟಿಗೆ ತೇಜಸ್ವಿ ಬಂದಿದ್ರು. ಅವರು ವೇದಿಕೆಯ ಮೇಲೆ ಕೂತಿದಾರೆ, ಕಡೆ ಹಿರಿಯರೊಬ್ಬರು ಗಂಭೀರವಾಗಿ ವಿಚಾರ ಮಂಡಿಸ್ತಾ ಇದಾರೆ ಆಗ ತೇಜಸ್ವಿಯವರ ಎರಡೂ ಕಾಲುಗಳು ಎದುರಿನ ಟೀಪಾಯ್ ಮೇಲೆ ಬಂತು!!! ಇದೊಂದು ಸಭೆ, ಇದಕ್ಕೆ ಶಿಷ್ಟಾಚಾರ ಇದೆ, ಇಲ್ಲಿ ಜನ ಕೂತಿದ್ದಾರೆ, ಯಾರೋ ಗಂಭೀರವಾಗಿ ಮಾತಾಡ್ತಿದಾರೆ ಅನ್ನುವ ಯೋಚನೆಯೆಲ್ಲಾ ಬಿಟ್ಟು ತಮ್ಮ ಎರಡೂ ಕಾಲುಗಳನ್ನ ಎದುರಿಗಿನ ಟೀಪಾಯ್ ಮೇಲಿಟ್ಟು ಎದುರುಗಡೆ ದೂರದಲ್ಲಿ ಕಾಣ್ತಾ ಇದ್ದ ಬಂಟಮಲೆ ಅನ್ನುವ ಬೃಹತ್ ಅರಣ್ಯವನ್ನ ನೋಡ್ಲಿಕ್ಕೆ ಶುರು ಮಾಡಿದ್ರು. ಇದು ತೇಜಸ್ವಿ!!! ಎಲ್ಲಿಯೂ ನಕಲಿತನ ಇಲ್ಲ. ಒಳಗೆ ಅನ್ನಿಸ್ತಿರೋದೊಂದು, ಹೊರಗೆ ತೋರಿಸಿಕೊಳ್ದೊಂದು ಅಮೇಲೆ ಮಾತಾಡೋದೊಂದು ಇಂತ ನಾಟಕಗಳೆಲ್ಲಾ ಗೊತ್ತೆ ಇರಲಿಲ್ಲ ಅವರಿಗೆ.mallikarjun