.
ತೇಜಸ್ವಿ
ಕುತೂಹಲ – ಕುವೆಂಪುರವರ
ಗಿಫ್ಟು?
“ಕುತೂಹಲ ಅಂದ್ರೆ ವಿಪರೀತ ಅದು.
ಅವರು
ತೀರಿಹೋದ ಮೇಲೆ ಕೃಪಾಕರ ಸೇನಾನಿ ಒಂದು ಆರ್ಟಿಕಲ್ ಬರೆದ್ರು,
’ಅದಮ್ಯ ಕುತೂಹಲ ಹಠಾತ್ ಅಂತ್ಯ’ ಅಂತ.
ಅವರ
ಅಂತ್ಯ ಯಾಕಾಯ್ತು ಅಂದ್ರೆ ಅವರ ಅದಮ್ಯ ಕುತೂಹಲದಿಂದ ಆಯ್ತು ಅಂತ.
ಯಾವುದನ್ನೇ
ಆಗ್ಲಿ ತುಂಬಾ ಕುತೂಹಲದಿಂದ ನೋಡೋರು ಅವರು.
ನಾವೆಲ್ಲೊ
ಹೋಗ್ತಾ ಇರ್ತೀವಿ ಅಂತ ಇಟ್ಕೊಳಿ.
ನಮಗೆ
ಕಾಣಸ್ದೇ ಇರೋದೆಲ್ಲ ಅವರಿಗೆ ಕಾಣ್ಸಿರೋದು.
. ಆಮೇಲೆ ಅವರ ಕುತೂಹಲ ತಣೀತಾ ಇರ್ಲಿಲ್ಲ. ’
ಇದು
ಇಲ್ಲಿ ಯಾಕಿದೆ?
ಈ ಸೀಸನ್ ನಲ್ಲಿ ಯಾಕಿದೆ?
ಇದರ ಬದುಕಿನ ಕ್ರಮ ಏನು?’
ಇದನ್ನೆಲ್ಲಾ
ತಿಳ್ಕೊಳ್ಳೋಕೆ ಪ್ರಯತ್ನ ಪಡೋರು. ಬಹುಶಃ
ಅದು
ಅವರಿಗೆ ಕುವೆಂಪುರವರ ಬಳುವಳಿ ಅಂತ ಕಾಣ್ತದೆ.
ಕುವೆಂಪುರವರಿಗೆ
ಕುತೂಹಲ ಇತ್ತು ಅಂತ ಯಾರೂ ಹೇಳೋದಿಲ್ಲ. ಬಟ್ ನೀವು ನಿಧಾನವಾಗಿ ಅವರ ಕವನಗಳನ್ನ,
ಕಾದಂಬರಿಗಳನ್ನ, ಮಲೆನಾಡಿನ ಚಿತ್ರ ಇತ್ಯಾದಿಗಳನ್ನೆಲ್ಲ ಪ್ರಕೃತಿಯನ್ನ ಅವರಷ್ಟು ಸೂಕ್ಷ್ಮವಾಗಿ ಅವಲೋಕಿಸಿರುವ ಲೇಖಕರೇ ಇಲ್ಲ.
ಆದ್ರೆ
ಅವರು ಅದಕ್ಕೆ ಒಂದು ವೈಜ್ಞಾನಿಕ ಟಚ್ ಕೊಟ್ಬಿಟ್ಟು ಬರೆದಿಲ್ಲ. ಅದಕ್ಕೆ ಬಹಳ ಜನಕ್ಕೆ ಗೊತ್ತಾಗಿಲ್ಲ. ಅವರು ಒಂದು ರೀತಿ ಎಮೋಶನಲ್ ಆಗಿ ಅದನ್ನೆಲ್ಲ ಬರೆದು ನಮಗೆ ಹೇಳಿದಾರೆ.
ನಾವು
ಅದನ್ನೆಲ್ಲ ಓದಿಬಿಟ್ಟು
’ಎಷ್ಟು ಚೆನ್ನಾಗಿ ಬರೆದಿದ್ದರೆ?’ ಅಂತೀವಿ.
ಬಟ್ ಇಟ್ಸ್ ಆಲೊ ಅಬ್ಸರ್ವೇಷನ್. ಕುವೆಂಪುರವರಿಂದ ಬಳುವಳಿಯಾಗಿ ಪಡೆದ ಆ
ಅಬ್ಸರ್ವೇಷನ್ನಿಗೆ
ತೇಜಸ್ವಿ
ಸೈಂಟಿಫಿಕ್ ಟಚ್ ಕೊಟ್ರು. ಕುವೆಂಪುರವರು ಒಂದು ಹಕ್ಕಿಯ ಗಾನದ ಇಂಪನ್ನ ವಿವರಿಸೋರು. ಇವರು ಇನ್ನೂ ಆಳಕ್ಕೆ ಹೋಗಿ ’ಯಾಕಿದು ಈ ಸೀಸನ್ ನಲ್ಲೇ ಹಾಡ್ತದೆ?
ಯಾಕೆ
ಹೀಗೇ ಹಾಡ್ತದೆ?’
ಈ ರೀತಿಯ ವೈಜ್ಞಾನಿಕ ವಿಶ್ಲೇಷಣೆಯನ್ನ ಕುವೆಂಪುರವರಿಂದ ಬಳುವಳಿಯಾಗಿ ಪಡೆದ ಅಬ್ಸರ್ವೇಷನ್ನಿಗೆ ಸೇರ್ಸಿದ್ರು. ಸೊ ಅದು ಅವರ ಕುತೂಹಲದ ಮೂಲ ಅಂತ ನನಗನ್ಸುತ್ತೆ
“ಅವ್ರಿಗೆ
ಕಾಲಲ್ಲಿ ಸಣ್ಣದು ಒಂದು ಇಸಬು ಅಂತೀವಲ್ಲ ಅದಿತ್ತು.
ಏನೂ ತೊಂದ್ರೆ ಕೊಡ್ತಿರ್ಲಿಲ್ಲ ಅದು.
ಯಾವಾಗ್ಲೊ ಚಳಿಗಾಲದಲ್ಲಿ ಅದು ಒಂದು ಸ್ವಲ್ಪ ಬಾಧೆ ಕೊಡೋದು. ಅದಕ್ಕೆ ಬೆಟ್ನೋವೈಟ್ ಅಂತ ಇಟ್ಕೊಂಡಿರೋರು, ಅದನ್ನ ಕಾಲಿಗೆ ಹಾಕಿ ಉಜ್ಜಿದ್ರೆ ನೋವು ಕಡಿಮೆ ಆಗ್ಬಿಡೋದು.
ಹಿಂಗೆ ಆಗ್ತಿರ್ಬೇಕಾದ್ರೆ ೨೦೦೬ರಲ್ಲಿ ಈ
ಚೈನೀಸ್ ಗಳು ಒಂದಷ್ಟು ಔಷಧಿಗಳನ್ನ ಬಿಟ್ರು ಬಜಾರಿಗೆ ಅದು ಅದು ಮಾಡಿಬಿಡುತ್ತೆ, ಇದು ಮಾಡಿಬಿಡುತ್ತೆ ಅಂತ ಹೇಳ್ಕೊಂಡು
.
ಆ ಔಷಧಿಗಳನ್ನ ಮಾರೊ ಒಬ್ಬ ಏಜೆಂಟ್ ಒಬ್ಬ ಮೂಡಿಗೆರೆನಲ್ಲಿದ್ದ. ಆಚಾರಿ ಅವನು. ಮಾಯಲೋಕ ಓದಿದ್ರೆ ನಿಮಗೆ ಗೊತ್ತಾಗಿರುತ್ತೆ, ಈ
ಥರ ಲೋಯರ್ ಸ್ಟ್ರಾಟ ಗಿರಾಕಿಗಳೆಲ್ಲ ನಮ್ಮ ತೇಜಸ್ವಿಗೆ ತುಂಬಾ ಫ್ರೆಂಡ್ಸು
.
ಅದೇನ್ ಇವರ ಟೈಮು ಅಷ್ಟೊತ್ತಿಗೆ ಕೆಟ್ಟಿತ್ತೊ ಏನೊ ಆ ಆಚಾರಿ ಬಂದು ಇವರಿಗೆ ತಗಲಾಕೊಂಡ. ಬಂದೋನೆ
’ಸಾರ್ ಎಂತ ಖಾಯಿಲೆ ಇದ್ರು ವಾಸಿ ಮಾಡ್ಬಿಡ್ತಾರೆ ಸಾರ್ ಚೈನಾದವರು.
ನಾನು ಹೋಗಿ ಒಂದು ಟ್ರೈನಿಂಗ್ ತಗೊಂಡು ಬಂದಿದೀನಿ.
ಒಂದು ಆಯಿಲ್ ಇದೆ. ಅದನ್ನ ಮೈಗಾಕಿ ಉಜ್ಜಿದ್ರೆ ನವಯುವಕ ಆಗ್ಬಿಡ್ತೀರಿ ನೀವು’ ಅಂದ.
’ಲೇಯ್ ನವಯುವಕ ಪವಯುವಕ ಯಾವನಿಗ್ ಬೇಕಲೇಯ್?
ಕಾಲಲ್ಲಾಗಿರೊ ಇಸುಬು ಹೋದ್ರೆ ಸಾಕು.
ಏನೊ ಅದು?’
ಅಂದ್ರು ಇವರು.
’ಸಾರ್ ಆ
ಆಯಿಲ್ ಹಾಕಿ ತೀಡಿಬಿಟ್ಟರೆ ಹೊರಟೇ ಹೋಗುತ್ತೆ ಸಾರ್’
ಅಂದ ಅವನು.
’ಸರಿ ತಗೊಂಡ್ ಬಾ ಏನದು ನೋಡೇ ಬಿಡಾಣ…’
ಅಂದ್ರು ತೇಜಸ್ವಿ.
ಅದರ ಹೆಸರು
’ಗೂಸಾ ಆಯಿಲ್’
ಅಂತ. ಅವನು ಅದನ್ನ ತಂದ. ತಂದಾಗ ಅದನ್ನ ತಿಡೋದಕ್ಕೆ ಒಂದು ಮೆಥಡ್ ಇದೆ ಹಿಂಗೆ ಬಳಿಬೇಕು, ಹಿಂಗೆ ಉಜ್ಜಬೇಕು ಅಂತೆಲ್ಲ.
ಹಂಗೆ ಎಲ್ಲಾ ತೀಡಿಸ್ಕೊಂಡ್ರು. ಆದರೆ ಆ ಆಯಿಲ್ ಜೊತೆ ಬಂದಿರೊ ಬುಕ್ ಲೆಟ್ ನಲ್ಲಿ ಆ
ಅಯಿಲ್ ನ
ಕೊಬ್ಬರಿ ಎಣ್ಣೆ ತರದ ಯಾವುದಾದ್ರು ಎಣ್ಣೆ ಜೊತೆಗೆ ಜಸ್ಟ್ ಎರಡು ಡ್ರಾಪ್ ಹಾಕಿ ಉಪಯೋಗಿಸಬೇಕು ಅಂತ ಇತ್ತು. ಇವರು ಅದನ್ನ ಓದದೇ ಉದಾಸೀನ ಮಾಡಿದ್ರೊ ಅಥವ ಆ
ಆಚಾರಿಗೆ ಅದರ ಬಗ್ಗೆ ಗೊತ್ತಿರಲಿಲ್ಲವೊ ಗೊತ್ತಿಲ್ಲ ಬಟ್ ಆ ಆಯಿಲ್ ನೇ ಡೈರೆಕ್ಟಾಗಿ ಹಾಕ್ಕೊಂಡು ಉಜ್ಜಿ ಉಜ್ಜಿ ಉಜ್ಜಿ ಉಜ್ಜಿ ಇಟ್ಟುಬಿಟ್ರು.
ಆದರೆ
ಅವರು ಯಾರ ಮಾತು ಕೇಳೋರಲ್ಲ.
ಅವರು ಸ್ಕೂಟ್ರು ಹತ್ತಿದ್ರು, ಸ್ಟಾರ್ಟ್ ಮಾಡಿದ್ರು, ಬೆಟ್ಟ ಹಟ್ಟಿದ್ರು, ಇಳಿದ್ರು,
ಭಾರ ಎತ್ತಿದ್ರು,
ಹಾಗೇ ನಾರ್ಮಾಲ್ಲಾಗೆ ಕೆಲಸ ಮಾಡ್ತಿದ್ರು…ಹಿಂಗಾಗಿ ಏಪ್ರಿಲ್ ಏಳನೇ ತಾರೀಖು ಅದೇ ಸ್ಕೂಟ್ರಲ್ಲಿ ಹೋಗಿ ಬಿರ್ಯಾನಿ ತಗೊಂಡು ಬಂದು,
ಊಟ ಮಾಡಿ…ಹಠಾತ್…
… …. ’ಏನ್ ಮಾಡೋದು…ಏನೂ ಮಾಡೊ ಹಾಗಿಲ್ವಲ್ಲ…ಹೋದ್ರು ಅಷ್ಟೆ…
“ಅವರು ಹೋಗಿದ್ದು ಈಗಿನ ಮಕ್ಕಳಿಗಂತೂ ಖಂಡಿತ ನಷ್ಟ ಅಂತಾನೇ ಹೇಳ್ತೀನಿ. ಯಾಕಂದ್ರೆ ಅವರು ಇದ್ದಿದ್ರೆ ಇನ್ನೊಂದೆರಡು ಮೂರು ಕಾದಂಬರಿ ಬರಿಬೇಕು ಅಂತಿದ್ರು ಅದಾಗಿರೋದು, ’ಮಿಲೇನಿಯಂ ಸರಣಿ ಥರದ ಇನ್ನೊಂದು ಸೀರೀಸ್ ಅದು ಬಂದಿರೋದು. ಸೊ ಅವೆಲ್ಲ ಬರಹಗಳ ಗುರಿ ಮುಖ್ಯವಾಗಿ ಮಕ್ಕಳು. ಸೊ ಅದನ್ನೆಲ್ಲ ಗಮನಿಸಿದಾಗ ನಷ್ಟ ಅವರು ಹೋಗಿದ್ದು ಅಂತ ಅನ್ಸುತ್ತೆ”-mallikajuna
No comments:
Post a Comment