Wednesday, March 25, 2015

ಎಪ್ರಿಲ್-೭ ರ೦ದು ನಮ್ಮನಗಲಿದ ಕಾಡಿನ ಸ೦ತ ತೇಜಸ್ವಿಗೆ ನಮನ-1(-ಮಲ್ಲಿಕಾರ್ಜುನ )



ಎಪ್ರಿಲ್-೭ ರ೦ದು ನಮ್ಮನಗಲಿದ  ಕಾಡಿನ ಸ೦ತ ತೇಜಸ್ವಿಗೆ ನಮನ-1
 
ತೇಜಸ್ವಿಯವರ ಸಾಹಿತ್ಯವನ್ನ analiseಮಾಡೋದಕ್ಕೆ
ಸಾಹಿತ್ಯದ ಸರಕಿನಲ್ಲಿ ಹತ್ಯಾರುಗಳೇ ಇಲ್ಲ
ತೇಜಸ್ವಿ ನಿಜವಾದ ಸಾಹಿತ್ಯದ ಹಿರಿಮೆನೇ ಅದು
ಯಾರ ಜಪ್ತಿಗೂ ಸಿಗದಂತದ್ದು
.ಹೀಗಾಗಿ ಅವರು ನನ್ನನ್ನ, ನಮ್ಮನ್ನ, ನಮ್ಮಂತಹ ಎಷ್ಟೋ ಮನಸ್ಸುಗಳನ್ನ ಉದ್ದೀಪಿಸಿದವರು
. ಮತ್ತು ಅವರ ಸೆನ್ಸ್ ಆಫ್ ಹ್ಯೂಮರ್ ಇದೆಯಲ್ಲ, ವಿನೋದ ಪ್ರಜ್ಞೆ ಅವರ ಯಾವುದೇ ಕತೆಗಳಲ್ಲಿರಬಹುದು ಅದು ಅದನ್ನ
ಹ್ಯೂಮನ್ ಅಬ್ಸರ್ಡಿಟಿ ಅಂತ ಕರೀತಾರೆ, ಅಂತಹ ಒಂದು ಹ್ಯೂಮನ್ ಅಬ್ಸರ್ಡಿಟಿ,
ಒಂದು ವಕ್ರ ವಿನೋದ ಆರೀತಿಯ ಒಬ್ಬ ವಕ್ರ ವಿನೋದದ ಚಕ್ರವರ್ತಿ ಅಂತ ಕರೀಬಹುದು
 ನಮ್ಮ ತೇಜಸ್ವಿಯವರನ್ನ. ವಕ್ರ ವಿನೋದ ಚಕ್ರವರ್ತಿಯಿಂದ ತುಂಬಾ ಕಲಿಬೇಕಿದೆ ನಾವು.
 ಯಾಕಂದ್ರೆ ಹಿ ಲಿಬರೇಟೆಡ್ ಅಸ್.
ಸಾಹಿತ್ಯ ಅಂದ್ರೆ ಅದೇನೊ ಒಂದು ಫಾರ್ಮ್ಯಾಟ್ ಇಟ್ಕೊಂಡು ಬರೆದಿದ್ದಲ್ಲಪ್ಪ.
 ಸಾಹಿತ್ಯ ಅಂದ್ರೆ ಹೀಗೂ ಇರುತ್ತೆ ನೋಡಿಅಂತ ಅವರು
 ನಮಗೆ ಹಲವು ಹೊಸ ಹಾದಿಗಳನ್ನ ತೆರೆದು ತೋರಿಸಿದ್ರು
 ಅವರು ಒಂದು ರೀತಿ ಮೌನದ ತವರುಮನೆ ಇದ್ದ ಹಾಗಿದ್ದರು.
ಮೌನದ ಒಂದು ದೊಡ್ಡ ತವರುಮನೆ.
 ಕಡುಮೌನಕ್ಕೆ ಎಲ್ಲಿಯಾದರೂ ನೆಲೆಸೋದಕ್ಕೆ ಅವಕಾಶ ಕೊಟ್ರೆ ಅದು ತೇಜಸ್ವಿಯವ್ರನ್ನ ಆರಿಸಿಕೊಳ್ಳುತ್ತೆ

ಅದಕ್ಕಾಗಿಯೇ ನೋಡಿ ಅವರು ಆಯ್ದುಕೊಂಡಂತಹ ಅವರ ಹವ್ಯಾಸಗಳು ಅದು ಪೋಟೋಗ್ರಪಿ ಇರಬಹುದು, ಮೀನು ಹಿಡಿಯೋದಿರಬಹುದು ಅದರ ಅವಿಭಾಜ್ಯ ಅಂಗಾನೇ ಮೌನ.
ಮೀನು ಹಿಡಿಯುವವನಿಗೆ ಇರಬೇಕಾದ ಮೊದಲ ಕ್ವಾಲಿಫಿಕೇಷನ್ನೇ ಅವನು ಮಾತಾಡಬಾರದು.
 ವೈಲ್ಡ್ ಪೋಟೋಗ್ರಫಿಗೆ ಬೇಕಾದ ಮೊದಲ ರಿಕ್ವಯರ್ಮೆಂಟೇ ಅವನು ಮಾತಾಡ್ಬಾರದು.
ಸೊ ಮಾತೇ ಜ್ಯೋತಿರ್ಲಿಂಗವಾದ ಒಬ್ಬ ಸಾಹಿತಿ ಮಾತೇ ತ್ಯಾಜ್ಯವಾದ ಇಂತಹ ಹವ್ಯಾಸಗಳನ್ನಿಟ್ಟುಕೊಂಡಾಗ ಯಾವ ರೀತಿಯ ತುಂಬಾ ಇಂಟೆನ್ಸಿವ್ ಆದ ಸಾಹಿತ್ಯ ಅಲ್ಲಿ ಸೃಷ್ಟಿ ಆಗಬಹುದು ಅಂತ ಯೋಚಿಸಿ. ಅಲ್ವ?
 ಸೊ ಬಹಳ ತೀವ್ರವಾಗಿ ಬದುಕನ್ನ ಬದುಕಿದವರು ಅವರು.

-ಮಲ್ಲಿಕಾರ್ಜುನ 

No comments:

Post a Comment