Sunday, March 29, 2015
ಎಪ್ರಿಲ್-೭ ರ೦ದು ನಮ್ಮನಗಲಿದ ಕಾಡಿನ ಸ೦ತ ತೇಜಸ್ವಿಗೆ ನಮನ-3
ನನಗನ್ಸುತ್ತೆ. ಸುತ್ತಲೂ ಕಾಡು, ಹಸಿರು, ನದಿ ಅವುಗಳ ಮಧ್ಯೆ ಊತ್ಕೊಂಡು ಹಿ ವಾಸ್ ಬಿಕಮಿಂಗ್ ಒನ್ ಅಮಾಂಗ್ ದಿ ನೇಚರ್ ಅಂತ ನನಗನ್ಸುತ್ತೆ. ಪ್ಲಸ್ ಅವರ ಮನಸ್ಸಿನಲ್ಲಿ ಓಡ್ತಿರೊ ಕಥೆ, ಕಾದಂಬರಿಗಳಿಗೆ ಒಂದು ಸ್ಪಷ್ಟವಾದ ರೂಪ ಕೊಡೋದಿಕ್ಕೆ ಆ ಟೈಮ್ ನ ಅವರು ಯೂಟಿಲೈಸ್ ಮಾಡ್ತಿದ್ರು ಅನೋದು ನನ್ನ ಅಬ್ಸರ್ವೇಷನ್ನು” -” ಚಂದ್ರುರವರು
-ಕೀಳುಮಟ್ಟದವಿಮರ್ಶೆಗಳನ್ನ, ಕಟು ಮಾತುಗಳಿಂದ
ತಪ್ಪಿಸಿಕೊಳ್ಲಿಕ್ಕೆ, ಮತ್ತು ಆ ಟೀಕೆಗಳಿಗೆ
ಉತ್ತರ
ಕೊಡ್ಲಿಕ್ಕೆ
ಅವ್ರಿಗೆ
ಸೂಕ್ತವಾಗಿ
ಕಂಡದ್ದು
ಕಾಡು. ಯಾಕಂದ್ರೆ ಕಾಡಿಗೆ ಮುಚ್ಚಿಕೊಳ್ಳುವ
ಗುಣ
ಇದೆ. ನಮ್ಮಲ್ಲಿ ವನವಾಸ ಮತ್ತು ಅಜ್ಞಾತವಾಸ
ಎಂಬ
ಎರಡು
ಪರಿಕಲ್ಪನೆಗಳು
ಬರ್ತಾವೆ. ಒಂದು ಕಾಡಿಗೆ ಹೋಗುವುದು, ಮತ್ತೊಂದು ಕಾಡಿನಲ್ಲೇ
ಯಾರಿಗೂ
ಗುರುತು
ಸಿಗದಂತೆ
ಅವಿತುಕೊಳ್ಳುವುದು. ಇಂತಹ ಕಾಡಿಗೆ ನಾವು ಶ್ರೀರಾಮನನ್ನ
ಕಳಿಸ್ತೇವೆ, ಪಾಂಡವರನ್ನ
ಕಳಿಸ್ತೇವೆ
ಮತ್ತು
ಇತಿಹಾಸದ
ಎಲ್ಲ
ರಾಜರುಗಳು
ಕಾಡಿನ
ಜೊತೆ
ಸಂಪರ್ಕ
ಇದ್ದವರೆ. ಅದೇ ರೀತಿ ಈ ಅಜ್ಞಾತವಾಸದ
ಕಲ್ಪನೆ
ತೇಜಸ್ವಿಯವರಲ್ಲೂ
ಇತ್ತು
ಅಂತ
ಅನ್ನಿಸ್ತದೆ. ತಾನು ಎಲ್ಲೂ ಕೂಡ ಹೊರಗಡೆ ಕಾಣಿಸಿಕೊಳ್ಳದೆ, ಕಾಡಿನಲ್ಲೇ
ಇದ್ದು, ಕಾಡಿನಲ್ಲಿ
ಕಾಡಿದ್ದನ್ನ
ಕಾಣದವರಿಗೆ
ಕೊಡಬೇಕು
ಅನ್ನುವ
ಉದ್ದೇಶದಿಂದ
ಅವರು
ಕಾಡನ್ನ
ಆರಿಸಿಕೊಂಡರು
ಮತ್ತು
ಆ
ಕಾಡು
ಇವರಿಗೆ
ಆ
ಮೌನವನ್ನ
ಕೊಡುಗೆ
ಕೊಟ್ಟಿತ್ತು
ಅಂತ
ನನಗನ್ನಿಸ್ತದೆ
·
’ಅನಂತಮೂರ್ತಿಯವರ ಮಾತು ಒಂದು ಕಲೆ ಆದ್ರೆ,
ಲಂಕೇಶರ ಬರಹ ಒಂದು ಕಲೆ ಆದ್ರೆ, ತೇಜಸ್ವಿಯವರ ಬರಹ ಮತ್ತು ಮೌನ ಒಂದು ಆರ್ಟ್…!!! ನಾನದನ್ನ ಪ್ರಧಾನವಾಗಿ ಗುರ್ತಿಸ್ತೇನೆ. ಎಷ್ಟೋ ಸಲ ನಾನು ಅವರ ಮನೆಗೆ ಹೋದಾಗ,
ಅಲ್ಲೇ ಉಳ್ಕೊಂಡಾಗ ಅವರ ಮೌನವನ್ನೇ ಗಮನಿಸ್ತಿದ್ದೆ. ಅವರ ಆ ಮೌನ ನನ್ನನ್ನ ಕಾಡಿಸಲಿಕ್ಕೆ ಶುರುಮಾಡಿತ್ತು. ಬಹುಶಃ ಈ ಮೌನವನ್ನ ಕಾಡು ಅವರಿಗೆ ಒದಗಿಸಿತ್ತು ಅಂತ ಕಾಣುತ್ತೆ. ಯಾಕಂದ್ರೆ ಕಾಡು ತೇಜಸ್ವಿಯವ್ರನ್ನ ರೂಪಿಸುವುದರಲ್ಲಿ ಬಹಳ ಪ್ರಮುಖ ಪಾತ್ರ ವಹಿಸಿದೆ.-ದೇರ್ಲರವರು
Subscribe to:
Posts (Atom)